ಈಟಿಗಾಳ-
ಪೂರ್ವಶಿಲಾಯುಗದ ಅಂತ್ಯಕಾಲದಲ್ಲಿ ಬಳಕೆಗೆ ಬಂದ ಬೇಟೆಯ ಸಾಧನ (ಹಾರ್ಪೂನ್). ಪ್ರಾಣಿಗಳ ಮೂಳೆ ಅಥವಾ ಜಿಂಕೆಯ ಕೊಂಬಿನಿಂದ ಮಾಡಿದ್ದು; ಮುಖ್ಯವಾಗಿ ಮೀನು, ತಿಮಿಂಗಿಲ ಮುಂತಾದ ಜಲಚರಗಳ ಬೇಟೆಗೆ ಇದನ್ನು ಉಪಯೋಗಿಸುತ್ತಿದ್ದರು. ಮುಂದುವರಿದ ಪೂರ್ವಶಿಲಾಯುಗದ ಮ್ಯಾಗ್ಡ ಲೀನಿಯನ್ ಸಂಸ್ಕøತಿಯಲ್ಲಿ ಹೆಚ್ಚು ಬಳಕೆಯಲ್ಲಿತ್ತು. ಈಟಿಯಂತೆ ಉದ್ದವಾಗಿದ್ದು ಹಿಂಬದಿಗೆ ತಿರುಚಿದ ಹಲ್ಲುಗಳನ್ನು ಹೊಂದಿದ್ದುರಿಂದ ಪ್ರಾಣಿಗಳನ್ನು ಇದರಿಂದ ತಿವಿದಾಗ ಅವುಗಳ ನರಗಳನ್ನು ಇದು ಕೊಕ್ಕೆಯಂತೆ ಹಿಡಿದುಕೊಂಡು ಆ ಪ್ರಾಣಿಗಳು ತಪ್ಪ್ಪಿಸಿಕೊಳ್ಳಲು ಅವಕಾಶ ಕೊಡುತ್ತಿರಲಿಲ್ಲ. ಅಜಿóೀಲಿಯನ್ ಮುಂತಾದ ಮಧ್ಯ ಶಿಲಾಯುಗ ಸಂಸ್ಕøತಿಗಳಲ್ಲಿ ಈಟಿಗಾಳದ ಉಪಯೋಗ ಹೆಚ್ಚಾಗಿತ್ತು. ಭಾರತದಲ್ಲಿ ಶಿಲಾಯುಗ ಸಂಸ್ಕøತಿಗಳಲ್ಲಿ ಇದರ ಬಳಕೆ ಕಂಡು ಬಂದಿಲ್ಲವಾದರೂ ಕ್ರಿ.ಪೂ. 2ನೆಯ ಸಹಸ್ರಮಾನದ ಅಂತ್ಯದಲ್ಲಿ ಗಂಗಾನದೀಬಯಲಿನ ತಾಮ್ರಯುಗೀನ ಸಂಸ್ಕøತಿಯಲ್ಲಿ ಕಂಡುಬರುತ್ತದೆ. ಮಧ್ಯಭಾಗದಲ್ಲಿ ಸೂಕ್ಷ್ಮ ಶಿಲಾಯುಧಗಳನ್ನು ಉಪಯೋಗಿಸುತ್ತಿದ್ದ ಪರ್ವತ ಗುಹಾವಾಸಿಗಳ ವರ್ಣಚಿತ್ರಗಳಲ್ಲೂ ಇವುಗಳ ಚಿತ್ರಣವಿದೆ. 					   
(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ